Tuesday, September 28, 2021
Home > Miscellaneous > ಬೌದ್ಧ ಮಠಗಳಿಂದ ಕಾಶ್ಮೀರದ ಚಿತ್ರಕಲಾ ಪರಂಪರೆಯ ಸಂರಕ್ಷಣೆ

ಬೌದ್ಧ ಮಠಗಳಿಂದ ಕಾಶ್ಮೀರದ ಚಿತ್ರಕಲಾ ಪರಂಪರೆಯ ಸಂರಕ್ಷಣೆ

ಸುಮಾರು 11ನೇ ಶತಮಾನದ ಕಾಲಾವಧಿ. ಇದು ಆಲ್ಚಿಯ ಮಠದ ಸಂಕೀರ್ಣ. ಆಲ್ಚಿಯು 108 ಮಠಗಲ್ಲಿ ಒಂದಾಗಿತ್ತು. ಇದು ಐತಿಹಾಸಿಕ ಸಂಖ್ಯೆಯಾದರೂ, ನಿಜವಾಗಿರುವ ಸಾಧ್ಯತೆ ಇದೆ. ಈ 108 ಮಠಗಳು, ಹಿಮಾಲಯದಾಚೆಗಿನ ಪ್ರದೇಶದ, ಪೂರ್ವಕಾಲದ ಮಠಗಳ ಸಮೂಹದ ಭಾಗ. ಪಾಶ್ಚಿಮಾತ್ಯ ಟಿಬೆಟ್, ಲಡಾಖ್, ಲಾಹೌಲ್-ಸ್ಪಿತಿ, ಕಿನ್ನೌರ್ ಪ್ರಾಂತ್ಯಗಳನ್ನೊಳಗೊಂಡ ಗುಗೆ ಸಾಮ್ರಾಜ್ಯದ ರಾಜ ಯೆಶೆ-ಓ ನ ಕಾಲದಲ್ಲಿ ಈ ಮಠಗಳನ್ನು ನಿರ್ಮಿಸಲಾಯಿತು. ಈ ಅದ್ಭುತ ಮಠಗಳನ್ನು, ಕಾಶ್ಮೀರದಿಂದ ಆಹ್ವಾನಿಸಲ್ಪಟ್ಟ ಕಲಾವಿದರಿಂದ ಕೆತ್ತಿಸಿ ಚಿತ್ರಿಸಲಾಯಿತು. ಕಾಶ್ಮೀರವು ಆ ಕಾಲದಲ್ಲಿ ಒಂದು ಬಹು ಮುಖ್ಯ ಬೌದ್ಧ ಕೇಂದ್ರವಾಗಿತ್ತು. ಲಡಾಖ್ ಅಥವಾ ಪಾಶ್ಚಿಮಾತ್ಯ ಟಿಬೆಟ್ ನಲ್ಲಿರುವ ಮಠಗಳ ಒಳಗೆ ಕಾಣಿಸುವ ಚಿತ್ರಕಲೆ ಅತ್ಯಂತ ಮಹತ್ತ್ವದ್ದಾಗಿದೆ, ಕಾರಣ ಇದು ಪ್ರಾಚೀನ ಕಾಶ್ಮೀರದ ಸಂಸ್ಕೃತಿಯನ್ನು ಸಾರುವ ಏಕಮಾತ್ರ ಉಳಿದುಕೊಂಡಿರುವ ಚಿತ್ರಣ. ಸ್ವತಃ ಕಾಶ್ಮೀರ ಕಣಿವೆಯೊಳಗಿನ ಚಿತ್ರಕಲೆಗಳ ನಾಶವಾಗಿ, ಲಡಾಖ್ ನಿಂದ ಪಶ್ಚಿಮ ಟಿಬೆಟ್ ನ್ ಉದ್ದಕ್ಕೂ ಸಿಗುವ ಈ ವರ್ಣಚಿತ್ರಗಳಲ್ಲಿ ಮಾತ್ರ ಆ ಕಾಲದ ಕಾಶ್ಮೀರದ ಕಲೆ, ವಾಸ್ತುಶಿಲ್ಪ, ಉಡುಪು ಇತ್ಯಾದಿ ವಿಷಯಗಳನ್ನು ಕಾಣಬಹುದು.

ಇದು ಹಸಿರು ಬಣ್ಣದ (ಬುದ್ಧನ ಸ್ತ್ರೀ ಪ್ರತಿರೂಪ) ತಾರಾ. ಇದರ ಆಕರ್ಷಕವಾದ ಛಾಯೆ, ಉತ್ಕೃಷ್ಟವಾಗಿ ಪ್ರಸ್ತುತಪಡಿಸಿರುವ ರೂಪ, ಅಜಂತಾದ ಚಿತ್ತಾರಗಳಲ್ಲಿ ಮೂಡುವುದನ್ನು ಗಮನಿಸಬಹುದು. ಅದಲ್ಲದೆ ಭಾರತೀಯ ಕಲೆಯ ಪ್ರಾಚೀನ ಸಂಪ್ರದಾಯದಂತೆ ಉಬ್ಬಿರುವ ಮುಂದಿನ ಕಣ್ಣನ್ನು ಗಮನಿಸಬಹುದು. ಇಲ್ಲಿ ನೀವು ಕಾಣಬಹುದಾದ ಸಮೃದ್ಧ ವಸ್ತ್ರ, ಜವಳಿಗಳು, ಇದು ಏಷ್ಯಾ ಮತ್ತು ಯುರೋಪನ್ನು ಸಂಪರ್ಕಿಸುವ ರೇಷ್ಮೆ ಮಾರ್ಗದ ನಾಡಿಯಾಗಿತ್ತೆಂದು ನೆನಪಿಸುತ್ತದೆ.

ಈ ರೇಷ್ಮೆ ಮಾರ್ಗದ ನಾಡಿಯು ಕಾಶ್ಮೀರ ಮತ್ತು ಲಡಾಖ್ ಇಂದ ಪ್ರಾರಂಭವಾಗಿ ದಕ್ಷಿಣ ಭಾರತದ ಕೇರಳಕ್ಕೆ ನಾಲಾ ಸೊಪಾರಾ ಮೂಲಕ ಪ್ರವೇಶಿಸುತ್ತದೆ. ಇಲ್ಲಿ ನೀವು ಎರೆಡೂ ಬದಿಯಲ್ಲಿ ಆಕೃತಿಗಳನ್ನು ನೋಡಬಹುದು. ದೇವರ ಪ್ರತಿಮೆ ಮಧ್ಯದಲ್ಲಿದ್ದರೆ ಅದರ ಅಕ್ಕ-ಪಕ್ಕದಲ್ಲಿರುವ ಆಕೃತಿಗಳು ಬಹು ಉತ್ಸಾಹ ಹಾಗೂ ಸಂತಸವನ್ನು ವ್ಯಕ್ತಪಡಿಸುತ್ತಿವೆ. ವಾಸ್ತವವಾಗಿ ಈ ಸಂತಸದ ಭಾವವೇ ಕಾಶ್ಮೀರದ ಕಲೆಯ ವಿಶಿಷ್ಟ ಗುಣ. ಭಾರತೀಯ ಸಂಪ್ರದಾಯದ ಸೌಂದರ್ಯಶಾಸ್ತ್ರದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಅಭಿನವಗುಪ್ತನು, ಈ ಚಿತ್ರಕಲೆಯನ್ನು ಸೃಷ್ಟಿಸಿರಬಹುದಾದ ಕಲಾವಿದರ ಕಾಲದ ಪೂರ್ವದಲ್ಲಿ, ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿದ್ದನು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮತ್ತೊಮ್ಮೆ ಕಾಶ್ಮೀರಿ ಕಲಾವಿದರ ರಚನೆಯ, ಆಲ್ಚಿಯ ಚಿತ್ರಕಲೆಯ ಬಗ್ಗೆ ಒಂದು ವಿವರಣೆ. ಇದು ಬಲರಾಮನ ಮಂದಿರ. ಇಲ್ಲಿ ಹಸಿರು ಬಣ್ಣದ ತಾರಾ ದೇವತೆಯ ಒಂದು ಗೋಪುರವನ್ನು ನೀವು ಗಮನಿಸಬಹುದು. ಇಲ್ಲಿನ ವೈಶಿಷ್ಟ್ಯತೆಯೆಂದರೆ ಹಿಂದೂ ಹಾಗೂ ಬೌದ್ಧ ಧರ್ಮದ ದೇವತೆಗಳು ಜೊತೆಯಲ್ಲಿರುವುದು. ಈ ವೈಶಿಷ್ಟ್ಯ ಈ ಸ್ಥಳದಲ್ಲಿ ಮಾತ್ರವಲ್ಲದೆ ಚೀನಾದ ಗುಹೆಗಳು, ಜಪಾನ್ ಹಾಗೂ ಹಲವಾರು ಜಾಗಗಳಲ್ಲಿ ಕಾಣಬಹುದು. ಚಿತ್ರದ ಕೆಳಭಾಗದಲ್ಲಿ ನೀವು ಗಮನಿಸಬಹುದಾದ ಸಂಗೀತಕಾರರ ವರ್ಣನೆ, ಈ ಚಿತ್ರದ ಭಾವಕ್ಕೆ ಉಲ್ಲಾಸವನ್ನು ತುಂಬುತ್ತದೆ.

ಇದು ಕಿನ್ನೌರಿನ ಅತಿ ಎತ್ತರದ ಪ್ರದೇಶದ ನಾಕೋ ಮಠದಲ್ಲಿರುವ ಮಂಡಲ ದೇವತೆ. ಇದೂ ಸಹ ಕಾಶ್ಮೀರಿ ಕಲಾವಿದರ ರಚನೆಯಾಗಿದ್ದು, ಆ ಕೋಮಲತೆ, ಆ ಆಂತರಿಕ ನೋಟ, ಆ ನಯ-ನಾಜೂಕಿನ ಭಾವಗಳು ಜಗತ್ತಿನ ದುಃಖಕ್ಕೆ ಕೊನೆಯಿದೆ ಎಂಬುದನ್ನು ನೆನಪಿಸುತ್ತದೆ.

Leave a Reply

%d bloggers like this:

Sarayu trust is now on Telegram.
#SangamTalks Updates, Videos and more.