Tuesday, October 19, 2021
Home > ಚರ್ಚೆ ತುಣುಕುಗಳು > ಏಕೆ ಸನಾತನ ಧರ್ಮದ ಏಕೀಶ್ವರವಾದವು ಕ್ರೈಸ್ತ ಮತ್ತು ಇಸ್ಲಾಂ ಮತಗಳಿಗಿಂತ ಶ್ರೇಷ್ಠವಾಗಿದೆ – ಮಾರಿಯಾ ವಿರ್ಥ್ ಅವರು ವಿವರಿಸುತ್ತಾರೆ

ಏಕೆ ಸನಾತನ ಧರ್ಮದ ಏಕೀಶ್ವರವಾದವು ಕ್ರೈಸ್ತ ಮತ್ತು ಇಸ್ಲಾಂ ಮತಗಳಿಗಿಂತ ಶ್ರೇಷ್ಠವಾಗಿದೆ – ಮಾರಿಯಾ ವಿರ್ಥ್ ಅವರು ವಿವರಿಸುತ್ತಾರೆ

ಮೂಲಭೂತವಾಗಿ ಸನಾತನ ಧರ್ಮವು ಇತರ ಮತಗಳಿಗಿಂತ ಏಕೆ ಶ್ರೇಷ್ಠವಾಗಿದೆಯೆಂದರೆ, ಇತರ ಮತಗಳು ಒಂದು ಕತೆಯ ಮೇಲಿನ ಕುರುಡುನಂಬಿಕೆಯ ಆಧಾರದ ಮೇಲೆ ನಿಂತಿವೆ. ಅವರಲ್ಲಿ ಯಾವುದೇ ಪ್ರಮಾಣವಿಲ್ಲ, ಪುರಾವೆಗಳಿಲ್ಲ. ಇದರಿಂದಾದ ಅಪಾಯಕಾರಿ ಪರಿಣಾಮಗಳು ಹಲವಾರು. ಈ ಕುರುಡುನಂಬಿಕೆ ಇಲ್ಲದಿದ್ದರೆ ಈ ರೀತಿಯ ವಸಾಹತುಶಾಹಿ ಪ್ರವೃತ್ತಿ ಸಾಧ್ಯವಾಗುತ್ತಿರಲಿಲ್ಲ. ಈ ರೀತಿಯ ಭೀಭತ್ಸ ಕ್ರೌರ್ಯ, ಇತರರನ್ನು ಗುಲಾಮರನ್ನಾಗಿಸುವ ಮನಸ್ಥಿತಿ, ಮುಂತಾದವುಗಳ ಮೂಲ ಕಾರಣ – ನಾವು ದೇವರಿಂದಲೇ ಆರಿಸಲ್ಪಟ್ಟವರು, ನಾವು ಸರ್ವಶ್ರೇಷ್ಠರು, ನಮ್ಮ ದೇವರು ಮಾತ್ರ ಸತ್ಯ ದೇವರು,ಅವನ ಸಂಪೂರ್ಣ ಬೆಂಬಲ ನಮಗಿದೆ ಎಂಬ ಪರಿಕಲ್ಪನೆ. ನಮ್ಮ ಮತವನ್ನು ನಂಬದವರು ಕಾಫಿರರು, ತುಚ್ಛರು, ಮನುಷ್ಯರೇ ಅಲ್ಲ ಎಂಬ ವಿಕೃತ ಮನೋಭಾವವಿಲ್ಲದಿದ್ದರೆ ಇಸ್ಲಾಮೀ ಅಕ್ರಮಣವು ಅಷ್ಟು ಕ್ರೂರವಾಗಿರುತ್ತಿರಲಿಲ್ಲ. ಅದು ಎಷ್ಟು ಅಮಾನುಷಾವಿಗ್ಗಿತ್ತೆಂದರೆ ತಡೆಯಲಾಗದಷ್ಟು ನೋವಾಗುತ್ತದೆ. ಲಕ್ಷಾಂತರ ಮಂದಿ ವಿನಾಕಾರಣ, ಅಥವಾ ತಪ್ಪು ಕಾರಣಗಳಿಗೆ ಕೊಲ್ಲಲ್ಪಟ್ಟರು.

ಈಗ, ಕ್ರೈಸ್ತ ಮತ್ತು ಇಸ್ಲಾಂ ಮತದ ವಾದವೇನೆಂದರೆ ತಮ್ಮ ಬಳಿ ಮಾತ್ರ ಒಬ್ಬ ದೇವನಿದ್ದಾನೆ, ಇತರರ ಬಳಿ ಯಾವುದೇ ದೇವರಿಲ್ಲ ಎಂದು. ಇದರಿಂದ ತಿಳಿಯುವುದೇನೆಂದರೆ ಅವರು ಏಕ ದೇವತಾವಾದವನ್ನು ತಿರುಚಿ, ಭ್ರಾಂತಿಗಳನ್ನು ಸೃಷ್ಟಿಸಿದ್ದಾರೆ ಎಂದು. ಏಕೆಂದರೆ ಸನಾತನ ಧರ್ಮದಲ್ಲಿ ಇರುವುದು ಏಕತ್ವವಾದ, ಎಲ್ಲೆಲ್ಲೂ ಅವನಿದ್ದಾನೆ, ಅವನಲ್ಲೇ ಎಲ್ಲವೂ ಇದೆ, ಎಲ್ಲವೂ ಬ್ರಹ್ಮ ತತ್ತ್ವ ಎಂಬ ದೃಷ್ಟಿಕೋನ. ಆದರೆ ಕ್ರೈಸ್ತ ಮತ್ತು ಇಸ್ಲಾಂ ಮತಗಳಲ್ಲಿ ಹೇಳುವುದು – ದೇವರು (ಗಾಡ್/ಅಲ್ಲಾಹು) ಎಂಬ ಒಬ್ಬ ಪ್ರತ್ಯೇಕ ವ್ಯಕ್ತಿ ಇದ್ದಾನೆ, ಅವನೊಂದಿಗೆ ನೀವು ಏಕತ್ವದ ಪ್ರತಿಪಾದನೆ ಮಾಡುವ ಹಾಗಿಲ್ಲ, ಪ್ರಪಂಚದಲ್ಲಿ ಇದಲ್ಲದೆ ಒಬ್ಬ ಪ್ರವಾದಿ ಇದ್ದಾನೆ, ದೇವದೂತರಿದ್ದಾರೆ, ಶೈತಾನ ಇದ್ದಾನೆ ಹಾಗೂ ಮನುಷ್ಯರು.

ಈಗ ನಾವು ಇದನ್ನು ಚರ್ಚಿಸೋಣ, ನಿಜವಾಗಿ ಇದರ ಕುರಿತು ಅಂತರ್ಮತೀಯ ಮಂಥನ ಮಾಡೋಣ. ಇಂದಿನವರೆಗೂ, ಅಂತರ್ಮತೀಯ ಚರ್ಚೆಗಳು ಕೇವಲ ಕಾಟಾಚಾರಕ್ಕೆ ಮಾಡಿದ ಹಾಗಿರುತ್ತವೆ. ಎರಡು ಅಂತಹ ಕಾರ್ಯಕ್ರಮಗಳಿಗೆ ನಾನು ಹೋಗಿದ್ದೆ, ಅದು ಕೇವಲ ಕ್ರೈಸ್ತ ಮತ್ತು ಇಸ್ಲಾಂ ಮತಗಳ ಪ್ರಚಾರಕ್ಕೋಸ್ಕರ ಮಾಡಿದ ಹಾಗಿತ್ತು. ಇದರ ಕುರಿತು ನಾನು ಒಂದು ಲೇಖನ ಬರೆದಿದ್ದೆ, ಹೇಗೆ ಈ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಕ್ರೈಸ್ತ ಮತವನ್ನು ಹೊಗಳಿದರು, ಮುಸ್ಲಿಮರು ಇಸ್ಲಾಮನ್ನು ಹೊಗಳಿದರು, ಹಾಗೂ ಹಿಂದೂಗಳು ಕೂಡ ಕ್ರೈಸ್ತ ಮತ್ತು ಇಸ್ಲಾಂ ಮತಗಳನ್ನು ಹೊಗಳಿದರು ಎಂದು.

ಡೆಹ್ರಾಡೂನಿನಲ್ಲಿ ನಾನು ಒಂದು ಅಂತರ್ಮತೀಯ ಚರ್ಚೆಯಲ್ಲಿ ಭಾಗವಹಿಸಿದ್ದೆ. ದೆಹಲಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳುವ ಅವಕಾಶವಿರಲಿಲ್ಲ, ಆದರೆ ಡೆಹ್ರಾಡೂನಿನಲ್ಲಿ ಅವಕಾಶವಿತ್ತು. ಅಲ್ಲಿ ನಾನು ಒಬ್ಬ ಕ್ರೈಸ್ತ ಪಾದ್ರಿಗೆ ಒಂದು ಪ್ರಶ್ನೆಯನ್ನು ಕೇಳಿದೆ, ಆಗ ಅವರು ತಕ್ಷಣ ವಿಷಯ ತಪ್ಪಿಸಿ ತಮ್ಮ ವಯಕ್ತಿಕ ಅನುಭವಗಳ ಬಗ್ಗೆ ಮಾತಾಡಲು ಶುರು ಮಾಡಿದರು. ಯೇಸು ಕ್ರಿಸ್ತನ ನನ್ನ ಅನುಭವ ಹಾಗೆ ಹೀಗೆ ಎಂದು ಹೇಳಲು ಶುರು ಮಾಡಿದರು. ಅವರೆಲ್ಲ ಹೀಗೇ ಮಾತಾಡುವುದು ಎಂದು ಈಗಾಗಲೇ ನನಗೆ ತಿಳಿದಿದೆ. ಇಲ್ಲಿ ಮುಖ್ಯವಾಗಿರುವುದು ನಿಮ್ಮ ಅನುಭವ ಅಥವಾ ವಯಕ್ತಿಕ ಅಭಿಪ್ರಾಯವಲ್ಲ, ಸೈದ್ಧಾಂತಿಕ ನೆಲೆಯಲ್ಲಿ ಮಾತಾಡಿ ಎಂದು ನಾನು ಹೇಳಿದೆ. ಆದರೆ ಅದರ ಕುರಿತು ತುಟಿ ಬಿಚ್ಚಲೂ ಕೂಡ ತಯಾರಿಲ್ಲ ಅವರು. ಖಡಾ ಖಂಡಿತವಾಗಿ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಅವರ ಬಳಿ ಮಾತ್ರ ಒಬ್ಬ ದೇವನಿದ್ದಾನೆ, ಅವನೇ ಸತ್ಯವಾದ ದೇವರು ಎಂಬುದೆಲ್ಲ ಹಸಿಸುಳ್ಳು, ಕಟ್ಟುಕತೆ. ಹಾಗೂ ಆ ಅತ್ಯಂತ ಪರಿಶುದ್ಧವಾದ ಪೂರ್ವಗ್ರಹರಹಿತವಾದ ಸತ್ಯ, ಸ್ಫುಟವಾದ ಸ್ವರೂಪದಲ್ಲಿ ಪರಮಾತ್ಮನ ಏಕತ್ವವಾದದ ಸಿದ್ಧಾಂತ, ಎಲ್ಲಾದರೂ ಇದೆಯೆಂದಾದರೆ ಅದು ಭಾರತದಲ್ಲಿ ಮಾತ್ರ, ಹಾಗೂ ಅದು ಇಲ್ಲಿ ಸನಾತನ ಕಾಲದಿಂದ ಅಸ್ತಿತ್ವದಲ್ಲಿದೆ.

Leave a Reply

Sarayu trust is now on Telegram.
#SangamTalks Updates, Videos and more.

Powered by
%d bloggers like this: