Tuesday, October 19, 2021
Home > ಇಸ್ಲಾಮಿಕ್ ಆಕ್ರಮಣಗಳು > ಔರಂಗಝೇಬನ ನಂತರ ಭಾರತದಲ್ಲಿ “ಪರಿಶುದ್ಧರ ನಾಡನ್ನು” (ಪಾಕಿಸ್ತಾನವನ್ನು) ಕಟ್ಟುವ ಅನ್ವೇಷಣೆ

ಔರಂಗಝೇಬನ ನಂತರ ಭಾರತದಲ್ಲಿ “ಪರಿಶುದ್ಧರ ನಾಡನ್ನು” (ಪಾಕಿಸ್ತಾನವನ್ನು) ಕಟ್ಟುವ ಅನ್ವೇಷಣೆ

ಈ ಕಥೆಯು ಔರಂಗಝೇಬನ ಮರಣದ ನಂತರ ಭಾರತದಲ್ಲಿ ಮರಾಠರ ಉತ್ಥಾನದಿಂದ ಪ್ರಾರಂಭವಾಗುತ್ತದೆ. ಮರಾಠರು ಭಾರತದ ಹಲವಾರು ಭಾಗಗಳನ್ನು ವಶಪಡಿಸಿಕೊಂಡಿದ್ದರು ಹಾಗೂ ಮುಘಲ್ ಸಾಮ್ರಾಜ್ಯವು ತನ್ನ ಕೊನೆಗಾಲಲ್ಲಿ ಸಣ್ಣ ಅರಸರ ಮಟ್ಟಕ್ಕೆ ತಲುಪಿತ್ತು. ಕೆಂಪು ಕೋಟೆಯ ಮೇಲೆ ಎರಡು ಧ್ವಜಗಳು ಹಾರುತ್ತಿದ್ದವು. ಒಂದು ಮುಘಲರದ್ದು ಮತ್ತೊಂದು ಮರಾಠರದ್ದು, ಮತ್ತು ನಿಜವಾದ ಅಧಿಕಾರವಿದ್ದದ್ದು ಮರಾಠರ ಕೈಯಲ್ಲಿ. ಮರಾಠರ ಪ್ರಭಾವ ಎಷ್ಟಿತ್ತೆಂದರೆ ಮುಘಲ್ ದೊರೆಯು ಮರಾಠರ ಅನುಮತಿಯಿಲ್ಲದೆ ಒಂದು ಹುಲ್ಲುಕಡ್ಡಿಯನ್ನು ಕೂಡ ಅಲುಗಾಡಿಸಲು ಸಾಧ್ಯವಿರಲಿಲ್ಲ.

ಅದೇ ಕಾಲದಲ್ಲಿ “ಪರಿಶುದ್ಧರ ನಾಡು”, ಅಂದರೆ ಪಾಕಿಸ್ತಾನದ ವಿಚಾರವನ್ನು ರೂಪಿಸಲಾಯಿತು. ವಹಾಬಿ ಸಿದ್ಧಾಂತದ ಸ್ಥಾಪಕ, ಬಹಳ ಪ್ರಸಿದ್ಧರಾದ ಮುಹಮ್ಮದ್ ಇಬ್ನ್ ಅಬ್ದ್ ಅಲ್-ವಾಹಬ್ ಅವರ ಒಬ್ಬ ಸ್ನೇಹಿತ ಶಾಹ್ ವಾಲಿಯುಲ್ಲಾಹ್ ಎಂಬ ಹೆಸರಿನವರು. ಶಾಹ್ ವಾಲಿಯುಲ್ಲಾಹ್ ಅರೇಬಿಯಾದಲ್ಲಿ ಅಬ್ದ್ ಅಲ್-ವಾಹಬ್ ಅವರ ಜೊತೆ ಶಿಕ್ಷಣವನ್ನು ಪಡೆದರು. ಮುಘಲ್ ಸಾಮ್ರಾಜ್ಯದಂತ “ಪರಿಶುದ್ಧರ” ನೆಲದಲ್ಲಿ ಕಾಫಿರರು ಆಡಳಿತ ನಡೆಸುವುದು ಸಲ್ಲದು ಎಂಬುದರ ಪ್ರಬಲ ಪ್ರತಿಪಾದಕರಾಗಿದ್ದರು ಶಾಹ್ ವಾಲಿಯುಲ್ಲಾಹ್. ಅವರಿಗೆ “ಪಾಕಿಗಳ” ಅಂದರೆ ಪರಿಶುದ್ಧರ ಮೇಲೆ ಕಾಫಿರರು ಆಡಳಿತ ನಡೆಸುವುದು ಸಹಿಸಲಾಗದ ವಿಷಯವಾಗಿತ್ತು.

ಇದೇ ಕಾಲಮಾನದಲ್ಲಿ ಬ್ರಿಟಿಷರು ತಮ್ಮ ಪಡೆಗಳನ್ನು ಬಂಗಾಳದೆಡೆಗೆ ಕೊಂಡೊಯುತ್ತಿದ್ದರು ಮತ್ತು ಹೈದೆರ್ ಅಲಿಯು ಮೈಸೂರನ್ನು ವಶಪಡಿಸಿಕೊಂಡಿದ್ದ. ಮುಂದೆ ಅವನ ಮಗ ಟಿಪ್ಪು ಮೈಸೂರನ್ನು ಅಳುವವನಿದ್ದ. ಈಗ ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ, ಒಟ್ಟು ಇಬ್ಬರು ಈ ಪರಿಶುದ್ಧರ (ಅಂದರೆ ಪಾಕಿಗಳ) ನಾಡಿನ ಕುರಿತು ಚಿಂತಿಸಲು ಪ್ರಾರಂಭಿಸಿದ್ದರು. ಶಾಹ್ ವಾಲಿಯುಲ್ಲಾಹ್ ರೋಹಿಲ್ಖಂಡದ ಅಹ್ಮದ್ ಶಾಹ್ ಅಬ್ದಲಿ ಮತ್ತು ನಜೀಬುಲ್ಲಾಹ್, ಹಾಗೂ ಅವಧದ ಅಸಫ್-ಉದ್-ದೌಲಹ್ ನ ಜೊತೆ ಒಪ್ಪಂದ ಮಾಡಿದ್ದ. ಮುಂದೆ ಇದು ಪಾಣಿಪತ್ ಯುದ್ಧಕ್ಕೆ ನಾಂದಿ ಹಾಡುವುದಿತ್ತು. ೧೭೬೧ರಲ್ಲಿ ಮರಾಠರು ಆಘಾತಕಾರಿ ಸೋಲನ್ನನುಭವಿಸಬೇಕಾಯಿತು. ಆದರೆ ಆಶ್ಚರ್ಯಕರವಾಗಿ ಅಹ್ಮದ್ ಶಾಹ್ ಅಬ್ದಲಿ ಈ ಗೆಲುವನ್ನು ಪ್ರಬಲವಾಗಿ ಉಪಯೋಗಿಸಲು ವಿಫಲನಾದ. ಮತ್ತು ಮರಾಠರ ಸಾಕಷ್ಟು ಕಿರುಕುಳದಿಂದ ಭಾರತವನ್ನೇ ಬಿಟ್ಟು ಹೋಗಬೇಕಾಯಿತು. ಅಫ್ಘಾನಿಸ್ತಾನದಲ್ಲಿ ಕೂಡ ಅವನು ಬಂಡಾಯವನ್ನು ಎದುರಿಸುತ್ತಿದ್ದ.

ಬಹಳ ದೊಡ್ಡ ಸೋಲನನ್ನನುಭವಿಸಿದರೂ ಕೂಡ ಮರಾಠರು ಇದರಿಂದ ಚೇತರಿಸಿಕೊಂಡರು ಹಾಗೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡರು. ಆಡು ಭಾಷೆಯಲ್ಲಿ ಹೇಳುವ ಹಾಗೆ ಅವರ ಸಾಮ್ರಾಜ್ಯ ಕಟಕ್ ನಿಂದ ಅಟಕ್ ನ ವರೆಗೆ ವ್ಯಾಪಿಸಿಕೊಂಡಿತ್ತು. ಅವರ ಗಡಿಯು ಪಾರಂಪರಿಕವಾಗಿ ಭಾರತದ ಗಡಿ ಎಂದು ಪರಿಗಣಿಸಲ್ಪಟ್ಟ ಸಿಂಧು ನದಿಯ ದಡದ ವರೆಗೆ ಆಗಿತ್ತು. ಅದರಿಂದಾಚೆಗೆ ಗಾಂಧಾರ ದೇಶ. ಆದರೆ ಆದು ಮೌರ್ಯ ಸಾಮ್ರಾಜ್ಯ ಮತ್ತಿತರ ಕಾಲದಲ್ಲಿ ಬಿಟ್ಟರೆ, ಹೆಚ್ಚಾಗಿ ಯಾವುದೇ ಭಾರತೀಯ ರಾಜರ ಆಡಳಿತಕ್ಕೊಳಪಟ್ಟಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಟಿಪ್ಪು ಸುಲ್ತಾನನು ದಕ್ಷಿಣದಲ್ಲಿ ಪಾಕಿಗಳ (ಪರಿಶುದ್ಧರ) ನಾಡನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಿದ್ದ. ಇದಕ್ಕಾಗಿ ಅವನು ಅಫ್ಘಾನಿ ರಾಜನಿಗೆ ಮತ್ತು ಕಲೀಫನ ಬಳಿಗೆ, ಪಾಕಿಗಳ ನಾಡನ್ನು ಸ್ಥಾಪಿಸಲು, ಕಾಫಿರರನು ಸದೆಬಡಿಯಲು ಸಹಾಯವನ್ನು ಬೇಡಿ ಪತ್ರಗಳನ್ನು ಬರೆದಿದ್ದನು.

ಆದರೆ ನಮ್ಮ ಅದೃಷ್ಟದಿಂದಾಗಿ ಮತ್ತು ಅವನ ದುರದೃಷ್ಟವಶಾತ್ ಮಧ್ಯದಲ್ಲಿ ಶಕ್ತಿಶಾಲಿ ಮರಾಠಾ ಸಾಮ್ರಾಜ್ಯವಿದ್ದ ಕಾರಣ ಯಾವುದೇ ಸಹಾಯ ಇಲ್ಲಿ ತಲುಪಲಿಲ್ಲ. ಕೊನೆಗೆ ಮರಾಠರ, ನಿಜಾಮರ, ಮತ್ತು ಬ್ರಿಟಿಷರ ಸಂಯುಕ್ತ ಪ್ರಯತ್ನಗಳಿಂದಾಗಿ ಟಿಪ್ಪುವಿನ ಅವಸಾನವಾಯಿತು ಹಾಗೂ ಅವನೊಂದಿಗೆ ಮುಘಲರ ನಂತರ ಪರಿಶುದ್ಧರ ನಾಡು – ಪಾಕಿಸ್ತಾನವನ್ನು ಸ್ಥಾಪಿಸುವ ಮೊದಲ ಕನಸು ಅಲ್ಲೇ ನಾಶವಾಯಿತು.

ಎರಡನೇ ಪ್ರಯತ್ನವು ರಾಯ್ಬರೇಲಿಯ ಸಯೇದ್ ಅಹ್ಮದ್ ಬರೇಲ್ವಿಯದ್ದು. ಬರೇಲಿ ಅಲ್ಲ, ಇಂದಿಗೂ ಇದು ಬರೇಲ್ವಿ ಎಂದೇ ಕರೆಯಲ್ಪಡುವ ಸ್ಥಳ. ಅವನು ಶಾಹ್ ವಾಲಿಯುಲ್ಲಾಹ್ ನ ಹಿಂಬಾಲಕನಾಗಿದ್ದ ಮತ್ತು ಅವನ ಹಾಗೇ ಪಂಜಾಬ್ ನಲ್ಲಿ ಮಹಾರಾಜಾ ರಂಜಿತ್ ಸಿಂಘರ ಆಡಳಿತ, ಅಂದರೆ “ಕಾಫಿರರ” ಆಡಳಿತ ಇರುವುದು ಸಹಿಸಲಾಗಲಿಲ್ಲ. ಮತ್ತು ಪಾಕಿಗಳ ನಾಡನ್ನು ಸ್ಥಾಪಿಸುವ ಪ್ರಬಲ ಅಭಿಲಾಷೆಯನ್ನು ಹೊಂದಿದ್ದ. ಅದೇ ಗುರಿಯೊಂದಿಗೆ ಅವನು ಒಂದು ಸೇನೆಯನ್ನು ಕಟ್ಟಿ ಮಹಾರಾಜಾ ರಂಜಿತ್ ಸಿಂಘರ ವಿರುದ್ಧ ಜಿಹಾದ್ ಅನ್ನು ಆರಂಭಿಸಿದ. ಇದು ಮುಂದೆ ರಾಝ ಬರೇಲ್ವಿಯ, ಎಂದರೆ ಸುಮಾರು ೧೯೨೦-೩೦ರ ಇಸವಿಯ ವರೆಗೆ ಮುಂದುವರೆಯಿತು. ಮಹಾರಾಜಾ ರಂಜಿತ್ ಸಿಂಘರ ಸಾವಿನ ನಂತರ ಸಿಖ್ ಸಾಮ್ರಾಜ್ಯವು ಕುಸಿಯಿತು. ತದನಂತರ ಒಬ್ಬ ಸರ್ ಸಯೇದ್ ಅಹ್ಮದ್ ಖಾನ್ ಅವರು ಪಾಕಿಸ್ತಾನದ – ಪರಿಶುದ್ದರ ನಾಡಿನ ಸ್ಥಾಪನೆಯ ಆಂದೋಲನವನ್ನು ಮುಂದುವರೆಸಿದರು. ಅವರು ಅಲಿಘಡದಲ್ಲಿ ಒಂದು ಮದ್ರಸಾದಿಂದ ಇದನ್ನು ಆರಂಭಿಸಿದರು. ಮುಂದೆ ಇದು ಆಂಗ್ಲೋ-ಓರಿಯೆಂಟಲ್ ಕಾಲೇಜಾಯಿತು ಹಾಗೂ ಅದೇ ಇಂದಿನ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ. ಭಾರತದ ವಿಭಜನೆಯ ಸಿದ್ಧಾಂತ – ಟು ನೇಷನ್ ಥಿಯರಿಯನ್ನು ಸರ್ ಸಯೇದ್ ಅಹ್ಮದ್ ಖಾನ್ ಅವರು ಇದೇ ಅಲಿಘಡದ ಆಂಗ್ಲೋ-ಓರಿಯೆಂಟಲ್ ಕಾಲೇಜಿನಲ್ಲಿ ಅಧಿಕೃತವಾಗಿ ಸಿದ್ಧಪಡಿಸಿದರು. ಈ ಸಿದ್ಧಾಂತವನ್ನು ಇಸ್ಲಾಮೀ ಮತದ ಆಳವಾದ ತಳಹದಿಯ ಮೇಲೆಯೇ ಸಿದ್ಧಪಡಿಸಲಾಗಿತ್ತು. ಹಾಗಾಗಿ ನಾವು ಸ್ಪಷ್ಟವಾಗಿ ನಿಶ್ಚಯ ಮಾಡಬಹುದಾದುದೇನೆಂದರೆ, ಪಾಕಿಸ್ತಾನದ, ಅಂದರೆ “ಪರಿಶುದ್ದರ” ನಾಡಿನ ವಿಚಾರವು ಇಸ್ಲಾಮೀ ಮತದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದು, ಇದರ ಬೀಜವನ್ನು ಸರಿ ಸುಮಾರು ೧೭ನೇ ಶತಮಾನದಲ್ಲೇ ಬಿತ್ತಲಾಗಿತ್ತು ಎಂಬುದು.

Leave a Reply

Sarayu trust is now on Telegram.
#SangamTalks Updates, Videos and more.

Powered by
%d bloggers like this: