ಮೊದಲ ಬಾರಿ ಆಘಾತವಾಗಿದ್ದು. ನನ್ನ ತಂದೆ ಸಮೀಪದಲ್ಲಿದ್ದ ಶಾಲೆಯಲ್ಲಿ ಪಾಠ ಮಾಡ್ತಾ ಇದ್ದರು. ಅವಾಗವಾಗ, ಹಾಂ ರೈಸಿನಾ. ಇಲ್ಲೇ ಆ ಕಡೆ ಇದೆ. ರೈಸಿನಾ ಬಂಗಾಳಿ ಸ್ಕೂಲ್. ನಾವು ಮಕ್ಕಳು ಅವಾಗವಾಗ ಅಲ್ಲಿ ಆಡೋಕೆ ಹೋಗುತ್ತಾ ಇದ್ದೆವು. ಆಟ ಆಡಿದ ಮೇಲೆ ಈ ದೇಶದ ಲಕ್ಷಗಟ್ಟಲೆ ಮಕ್ಕಳು ಮಾಡುವ ಹಾಗೆ ನಾವೂ ಕೂಡ ಅರ್ಚಕರಿಂದ ಪ್ರಸಾದ ತಗೊಳ್ತಾ ಇದ್ವಿ. ಆಟ ಆಡಿದ ಮೇಲೆ ವಾಪಾಸ್ ಹೋಗ್ತಾ ಇದ್ವಿ. ಇಲ್ಲಿಯ ಮೂಲೆ ಮೂಲೇನು ನನಗೆ ಗೊತ್ತಿತ್ತು. ನನಗೆ ನೆನಪಿದೆ, ಒಂದು ದಿನ ಒಂದು ವಿದೇಶಿ ಜೋಡಿ ಗೈಡ್ ಜೊತೆ ವಾದಿಸುತ್ತ ಇದ್ದದ್ದು ನೋಡಿದೆ. ಇಲ್ಲಿ ಇರುವ ದೇವಸ್ಥಾನಗಳಲ್ಲೇ ದೊಡ್ಡದಾದ ಹಾಗೂ ಸುಂದರವಾದ ದೇವಸ್ಥಾನ ಇದು ಅಂತ ಗೈಡ್ ಹೇಳ್ತಾ ಇದ್ರು. ಅವರು ಪುಸ್ತಕ ನೋಡಿ “ಇದು ಹೊಸದಾಗಿ ಕಟ್ಟಿರುವ ದೇವಸ್ಥಾನ. 1939ರಲ್ಲಿ ಕಟ್ಟಿರೋದು. ನಾವು ದಕ್ಷಿಣ ಭಾರತದಲ್ಲಿ ಇರುವಂತಹ ಸುಂದರವಾದ ಹಳೆಯ ದೇವಸ್ಥಾನ ನೋಡಬೇಕು.” ಅದಕ್ಕೆ ಗೈಡ್ “ಇಲ್ಲ ನಮ್ಮಲ್ಲಿ ಅಂತಹ ದೇವಸ್ಥಾನ ಇಲ್ಲ” ಅಂತ ಹೇಳಿದ್ರು.
ಇಲ್ಲಿ ಒಂದು ಯೋಗಮಾಯ ದೇವಸ್ಥಾನ ಇದೆ ಆದ್ರೆ ಅದು ತುಂಬಾ ಚಿಕ್ಕ ದೇವಸ್ಥಾನ. ಅದಕ್ಕೆ ಅವರು ಹೇಳಿದ್ರು, ದೆಹಲಿ ಹಿಂದೂಗಳ ಪಟ್ಟಣ.ನಾವು ಇಲ್ಲಿ ನೂರಾರು ವರ್ಷ ಹಳೆಯ ಮಸೀದಿಗಳನ್ನೂ ನೋಡಿದ್ವಿ. ಉದಾಹರಣೆಗೆ 300 ವರ್ಷ ಹಿಂದಿನ ಜಾಮಾ ಮಸೀದಿ, ಈ ಮಸೀದಿ. ಆದರೆ ನಾವು ಯಾವುದೂ ಹಳೆಯ ದೇವಸ್ಥಾನ ನೋಡಿಲ್ಲ. ಅಂದ್ರೆ ಹಿಂದೂಗಳು ಹಿಂದೆ ಯಾವುದೇ ದೇವಸ್ಥಾನ ಕಟ್ಟಿಲ್ವಾ ಅಂತ ಕೇಳಿದ್ರು. ಅದಕ್ಕೆ ಹೌದು, ಬಹುಷಃ ಕಟ್ಟಿಲ್ಲ ಅನ್ಸುತ್ತೆ, ನೂರಾರು ವರ್ಷ ನಾವು ಯಾವುದೇ ದೊಡ್ಡ ದೇವಸ್ಥಾನ ಕಟ್ಟಿಲ್ಲ. ದೇವಸ್ಥಾನಗಳೆಲ್ಲ ಚಿಕ್ಕದಾಗಿ ಇರ್ತಿತ್ತು ಯಾಕಂದ್ರೆ ಆವಾಗ ದೇವಸ್ಥಾನದ ಗೋಪುರ ಕಾಣಿಸಬಾರದು ಎನ್ನುವ ಕಾನೂನು ಇತ್ತು ಅಂತ ಗೈಡ್ ಹೇಳಿದ್ರು.
ನನಗೆ ಇನ್ನೂ ನೆನಪಿದೆ, ಅದಕ್ಕೆ ಅವರು ಕೇಳಿದ್ರು “ನೀವು ನಿಮ್ಮ ದೇಶದಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿ ಇದ್ದೀರಾ? ನಿಮಗೆ ಹೇಗೆ ಅನ್ನಿಸ್ತಾ ಇತ್ತು” ಅಂತ. ಅದಕ್ಕೆ ಅವನು, ಯಾರು ಕೇಳಿದ್ರು ನೆನಪಿಲ್ಲ, ಹೆಂಗಸಾ ಅಥವಾ ಗಂಡಸಾ ಅಂತ. ನೀವು ಹೊರಗೆ ಹೋದಾಗ ಬೇರೆಯವರ ದೊಡ್ಡ ದೊಡ್ಡ ದೇವಸ್ಥಾನ ಇದ್ದರೂ ನಿಮ್ಮದೇ ಆದ ಒಂದು ದೇವಸ್ತಾನ ಇಲ್ಲ ಅಂತ ನೋಡಿದಾಗ ಏನು ಅನ್ನಿಸ್ತಾ ಇತ್ತು? ಆವಾಗ ಜನರು ಯಾವ ರೀತಿ ಬೇಸರಪಟ್ಟುಕೊಳ್ತಾ ಇದ್ದಿರಬಹುದು ಅಂತ ನಿಮಗೆ ಅನ್ನಿಸುತ್ತೆ?” ಅದಕ್ಕೆ ನನ್ನ ಹತ್ತಿರ ಉತ್ತರ ಇಲ್ಲ ಅಂತ ಗೈಡ್ ಹೇಳಿದ್ರು. ಆಮೇಲೆ ಅವರು ಹೊರಟು ಹೋದ್ರು. ಆಮೇಲೆ ಏನಾಯ್ತು ಅಂತ ನನಗೆ ನೆನಪಿಲ್ಲ. ವಿದೇಶಿಗರು ಅಲ್ಲಿಂದ ಎದ್ದು ಹೊರಟು ಹೋದ್ರು. ಆದರೆ ನಾನು ಇದನ್ನು ನನ್ನ ತಂದೆ ಜೊತೆ ಚರ್ಚೆ ಮಾಡಿದೆ. ನನ್ನ ತಂದೆ ಅದ್ಯಾಪಕರಾಗಿದ್ರು. ಇಂತಹ ವಿಷಯ ನಾವು ಮಾತಾಡೋದಿಲ್ಲ ಅಂತ ಅವರು ಹೇಳಿದ್ರು. ಅದಕ್ಕೆ ನಾನು ಕೇಳಿದೆ “ಅಪ್ಪಾ, ಅದಕ್ಕೆ ಕಳೆದ 800, 900 ವರ್ಷದಿಂದ ಜನರು ಯಾವುದೇ ದೊಡ್ಡದಾದ ವಿಶಾಲವಾದ ದೇವಸ್ಥಾನ ಕಟ್ಟಿಸಿಲ್ವಾ?, ಯಾಕಂದ್ರೆ ಅವರು.. ಜನರು ಹೆದರಿಕೊಂಡಿರ ಬೇಕು ಅದನ್ನು ಕಟ್ಟಿದ್ರೇ….. ಅವ್ರು ಹೇಳಿದ್ರು, “ಹೌದು ಬಹುಷಃ” ಆದ್ರೆ ಇದರ ಬಗ್ಗೆ ಮಾತಾಡಬೇಡ. ಯಾರ ಜೊತೆನೂ ಚರ್ಚೆ ಮಾಡಬೇಡ ಅಂತ ಅವ್ರು ಹೇಳಿದ್ರು. ನಾನೂ ಹಾಗೆ ಮಾಡಿದೆ.
ಈಗ್ಲೂ ನಾವು ಯಾಕೆ ಇಷ್ಟು ಹೆದರಿಕೊಂಡು ಇದ್ದೀವಿ? ನಾನೂ ದೊಡ್ಡವನಾದ ಮೇಲೂ ಈ ವಿಷಯ ಮರೆತಿರಲಿಲ್ಲ. ಇದರ ಬಗ್ಗೆ ಏನು ಹೇಳ್ತೀರಾ ಅಂತ ನನ್ನ ಉಪನ್ಯಾಸಕ ಮಿತ್ರರ ಹತ್ತಿರ ಕೇಳಿದೆ. ನಿಮಗೆ ಏನು ಅನ್ನಿಸ್ತಾ ಇದೆ. ಯಾಕೆ 1939ರಲ್ಲಿ ಮೊದಲ ಇಷ್ಟು ದೊಡ್ಡ ದೇವಸ್ತಾನ ಕಟ್ಟಿಸಿದ್ರು? ಅಂತ ಕೇಳಿದೆ. ಅವರು ಹೇಳಿದ್ರು. ಇದು ಬಹುಷಃ ರಾಷ್ಟ್ರ ಭಕ್ತಿಯಿಂದ ಆಗಿದ್ದು. ರಾಷ್ಟ್ರ ಭಕ್ತಿಯು ಹಿಂದುಗಳಿಗೆ ದೊಡ್ಡ ದೇವಸ್ತಾನ ಕಟ್ಟೋಕೆ ಧೈರ್ಯ ಕೊಟ್ಟಿತು. ಮುಂದುವರಿಸುತ್ತಾ ಅವರು ಹೇಳಿದ್ರು ” ಇದನ್ನು ಕಟ್ಟಿದ ಶಿಲ್ಪಿ, ನೂರಾರು ವರ್ಷದ ನಂತರ ಕಟ್ಟಿದ ಇಷ್ಟು ದೊಡ್ಡ ದೇವಸ್ಥಾನ ಇದು ತಿಳಿದು ಸಂತೋಷದಿಂದ ಅತ್ತರಂತೆ.