Tuesday, October 26, 2021
Home > ಇತಿಹಾಸ > ಗುರು ತೇಜ್ ಬಹದ್ದೂರರ ಬಲಿದಾನ ಮತ್ತು ಔರಂಗಜೇಬನೊಂದಿಗೆ ಅವರ ಸಂವಾದ

ಗುರು ತೇಜ್ ಬಹದ್ದೂರರ ಬಲಿದಾನ ಮತ್ತು ಔರಂಗಜೇಬನೊಂದಿಗೆ ಅವರ ಸಂವಾದ

ಗುರುದೇವ : “೩೦೦ ವರುಷಗಳ ಹಿಂದೆ ಭಾರತವನ್ನು ಔರಂಗಜೇಬ್ ಎಂಬ ಕ್ರೂರಿಯಾದ ರಾಜನು ಆಳುತಿದ್ದ. ಅವನು ತನ್ನ ಸಹೋದರನನ್ನು ಕೊಂದು, ತನ್ನ ತಂದೆಯನ್ನು ಬಂಧಿಯಾಗಿಸಿ , ಸಿಂಹಾಸನವನ್ನು ಆಕ್ರಮಿಸಿದ್ದ. ಅವನು ಭಾರತವನ್ನು ಒಂದು ಮುಸಲ್ಮಾನ ದೇಶವನ್ನಾಗಿ ಬದಲಾಯಿಸಬೇಕೆಂದು ನಿರ್ಧಾರ ಮಾಡಿದನು. ”

ಆದಿತ್ಯ : “ಯಾಕೆ ಗುರುದೇವ”

ಗುರುದೇವ : “ಮುಸಲ್ಮಾನರು ಅಳುತ್ತಿದ್ದ ಇತರ ದೇಶಗಳು ಇಸ್ಲಾಮೀಕರಣಗೊಂಡಿದ್ದವು, ತಾನು ಆಳುತ್ತಿದ್ದ ದೇಶವನ್ನು ಇಸ್ಲಾಮೀಕರಣಗೊಳಿಸಲು ನಿರ್ಧಾರ ಮಾಡಿದನು. ಅವನು ಹಿಂದೂಗಳನ್ನು ಮತಾಂತರಿಸಲು ಜಿಜಿಯಾ ಎಂಬ ಉಗ್ರ ಕರವನ್ನು ಹೇರಿದ ಮತ್ತು ಹಿಂದೂಗಳ ಬದುಕನ್ನು ಶೋಚನೀಯಗೊಳಿಸಿದ. ಅವನು ತನ್ನ ಸೇನಾಪತಿಗಳಿಗೆ ಪ್ರತಿದಿನ ಹಿಂದೂಗಳನ್ನು ಕೊಂದು ಅಥವ ಅವರನ್ನು ಮತಾಂತರಿಸಿ, ಜನಿವಾರವನ್ನು ತಂದು ತೂಕ ಮಾಡಲು ಆದೇಶ ಹೊರಡಿಸಿದ. ಔರಂಗಜೇಬನ ಸೇನಾಪತಿಗಳು ಬಹಳ ಹಿಂದೂಗಳನ್ನು ಕೊಂದರು, ಉಳಿದವರು ಮತಾಂತರಗೊಂಡರು. ”

ಆದಿತ್ಯ : ಔರಂಗಜೇಬನ ನಿರ್ಧಾರ ಸಫಲವಾಯಿತೇ?

ಗುರುದೇವ : ಇಲ್ಲ. ಅವನ ಕ್ರೂರತೆ ಜನರನ್ನು ಭಯಭೀತಗೊಳಿಸಿತು. ಅವನ ಸೈನ್ಯ  ಹೋದಲ್ಲೆಲ್ಲ ಮಂದಿರಗಳನ್ನು ಧ್ಯಂಸಗೊಳಿಸಿ ಅವುಗಳ ಅವಶೇಷದ ಮೇಲೆ ಮಸೀದಿಯನ್ನು ಕಟ್ಟುತ್ತಿದ್ದರು. ಮಂದಿರದಲ್ಲಿ ಪೂಜಿಸುತ್ತಿದ್ದ ವಿಗ್ರಹಗಳನ್ನು ಮಸೀದಿಗಳ ಮೆಟ್ಟಲುಗಳಿಗೆ ಉಪಯೋಗಿಸಿ ಹಿಂದೂಗಳಿಗೆ ಅವುಗಳನ್ನು ತುಳಿಯಲು ಬಲವಂತ ಮಾಡುತ್ತಿದ್ದರು.

ಆದಿತ್ಯ : ಇದರಿಂದ ಹಿಂದೂಗಳ ಆತ್ಮಸ್ಥ್ಯರ್ಯ ಕುಸಿಯಿತೇ?

ಗುರುದೇವ : ಇಲ್ಲ. ಬಹಳ ಜನ ಹಿಂದೂಗಳು ಮತಾಂತರವನ್ನು ವಿರೋಧಿಸಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಘಟನೆಗಳಿಂದ ಔರಂಗಜೇಬನು ಪೇಚಿಗೆ ಸಿಲುಕಿದ. ಎಲ್ಲ ಹಿಂದೂಗಳು ತಮ್ಮ ಪ್ರಾಣ ಕಳೆದು ಕೊಂಡರೆ ತಾನು ಯಾರನ್ನೂ ಆಳಲಿ ಎಂಬ ಗೊಂದಲಕ್ಕೀಡಾದ. ಅವನು ಮೊದಲು ಕಾಶ್ಮೀರದ ಎಲ್ಲ ಪಂಡಿತರನ್ನು ಮೊದಲು ಮತಾಂತರಿಸಲು ನಿರ್ಧರಿಸಿದ. ಕಾಶ್ಮೀರವೇ ಯಾಕೆ? ಕಾಶ್ಮೀರ ಹಿಂದೂ ಧರ್ಮದ ಕೇಂದ್ರಬಿಂದು ಆಗಿತ್ತು. ಕಾಶ್ಮೀರದ ಪಂಡಿತರು ಮತಾಂತರಗೊಂಡರೆ ಭಾರತದ ಉಳಿದ ಭಾಗಗಳನ್ನು ಸುಲಭವಾಗಿ ಮತಾಂತರಿಸಬಹುದೆಂಬುದು ಔರಂಗಜೇಬನ ಆಲೋಚನೆಯಾಗಿತ್ತು. ತನ್ನ ಸೇನಾಧಿಪತಿಗಳಿಗೆ ಕಾಶ್ಮೀರದ ಎಲ್ಲ ಪಂಡಿತರನ್ನು ಮತಾಂತರಿಸಲು ಅಥವಾ ಕೊಲ್ಲಲು ಆದೇಶ ನೀಡಿದ. ತಮ್ಮ ಮೇಲೆರಗಿದ ಸಾವಿನ ಸಂಕಟವನ್ನು ತಿಳಿದು, ಕಾಶ್ಮೀರ ಪಂಡಿತರಲ್ಲಿ ಪ್ರಮುಖರಾದ ಕೃಪಾ ರಾಮರು ಐನ್ನೂರು ಪಂಡಿತರೊಂದಿಗೆ  ಸಿಖ್ಖರ ಒಂಬತ್ತನೆಯ ಗುರು ತೇಜ್ ಬಹದ್ದೂರರನ್ನುಭೇಟಿ ಮಾಡಲು ಹೋದರು.

ಆದಿತ್ಯ : ಕಾಶ್ಮೀರ ಪಂಡಿತರು ಗುರು ತೇಜ್ ಬಹದ್ದೂರರ ಬಳಿ ಯಾಕೆ ಹೋದರು?

ಗುರುದೇವ : ಗುರು ತೇಜ್ ಬಹದ್ದೂರರು ದುರ್ಬಲರ ರಕ್ಷಕರೆಂದು ಗುರುತಿಸಿಕೊಂಡಿದ್ದರು.  ಪಂಡಿತರ ಸಂಕಟವನ್ನು ತಿಳಿದುಕೊಂಡ ಬಳಿಕ ಔರಂಗಜೇಬನಿಗೆ ಬುಧ್ಧಿ ಕಲಿಸಲು ಒಂದು ತ್ಯಾಗದ ಆವಶ್ಯಕತೆಯಿದೆಯೆಂದು ಹೇಳಿದರು. ಗುರುಗಳ ಮಗ ಗುರು ಗೋವಿಂದ್ ಸಿಂಗರು ಈ ತ್ಯಾಗವು ನಿಮ್ಮಿಂದ ಮಾತ್ರ ಸಾಧ್ಯ ಎಂದು ತನ್ನ ತಂದೆಗೆ ಹೇಳಿದನು.

ಆದಿತ್ಯ : (ಆಶ್ಚರ್ಯಚಕಿತನಾಗಿ)  : ಒಬ್ಬ ಚಿಕ್ಕ ಬಾಲಕ ತನ್ನ ತಂದೆಯ ಬಳಿ ಹಾಗೆ ಹೇಳಿದನೆ?

ಗುರುದೇವ : ಹೌದಪ್ಪಾ, ಆ ಕಾಲದಲ್ಲಿ ಚಿಕ್ಕ ಮಕ್ಕಳು ಕೂಡ ತುಂಬಾ ಜವಾಬ್ದರಿಯಿಂದ ನಡೆದುಕೊಳ್ಳುತ್ತಿದ್ದರು.

ಆದಿತ್ಯ : ಆ ಮೇಲೆ ಏನಾಯ್ತು?

ಗುರುದೇವ : ಗುರುಗಳು ಪಂಡಿತರೆಲ್ಲರಿಗೂ ಹಿಂದಿರುಗಲು ಸೂಚಿಸಿದರು ಮತ್ತು ತಮ್ಮ ಸಂದೇಶವನ್ನು ಸೇನಾಧಿಪತಿ ಇಫ್ತಿಖಾರ್ ಖಾನ್ನ ಮೂಲಕ ಕಳುಹಿಸಲು ತಿಳಿಸಿದರು. ಗುರುಗಳ ಸಂದೇಶ ಹೀಗಿತ್ತು “ನೀನು ಗುರುಗಳನ್ನು ಮತಾಂತರಿಸಲು ಸಫಲನಾದಲ್ಲಿ

ಇಡೀ ಭಾರತ ದೇಶವು ಮತಾಂತರಗೊಳ್ಳುವುದು. ಇಲ್ಲವಾದಲ್ಲಿ ನೀನು ಭಾರತವನ್ನು ಮಾತಾಂತರಗೊಳಿಸುವ ನಿನ್ನ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು”. ಗುರುಗಳ ಸಂದೇಶವನ್ನು ಕೇಳಿದ ಔರಂಗಜೇಬನು ತಾನು ಗೆದ್ದೆನೆಂದು ಭಾವಿಸಿದನು ಮತ್ತು ಒಬ್ಬ ಹಿಂದುವನ್ನು ಮತಾಂತರಿಸುವುದು ಬಹಳ ಸುಲಭದ  ಕೆಲಸವೆಂದು ಭಾವಿಸಿದನು. ಇದನ್ನು ಸಾಧಿಸಿದರೆ ತನ್ನ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವುದು ಎಂದು ಕನಸು . ಕಾಣತೊಡಗಿದನು.

ಗುರುಗಳು ಮತ್ತು ಅವರ ಅನುಯಾಯಿಗಳನ್ನು ಒಬ್ಬ ಖಾಝಿಯ ಮುಂದೆ ತಂದು ನಿಲ್ಲಿಸಲಾಯಿತು. ಖಾಜ಼ಿಯು ಇಸ್ಲಾಂ ಧರ್ಮವನ್ನು ಸ್ವೀಕರಿಸದೆ ಇದ್ದರೆ ಉಂಟಾಗುವ ಭೀಕರ  ಪರಣಾಮಗಳನ್ನು ಹೇಳುತ್ತಾ ಗುರುಗಳಿಗೆ ಬೆದರಿಕೆ ಹಾಕಿದನು. ಗುರುಗಳು ಅವನ ಮಾತುಗಳನ್ನು ಪಾಲಿಸಲು ನಿರಾಕರಿಸಿದರು. ಗುರುಗಳನ್ನು ಸರಪಣಿಯಲ್ಲಿ ಬಂಧಿಸಿ ರಾಜನ ದರ್ಬಾರಿಗೆ ಕರೆತರಲಾಯಿತು. ಗುರುಗಳ ಆಗಮನದಿಂದ ಸಭೆಯ ಶೋಭೆ ಹೆಚ್ಚಿತು ಮತ್ತು ಸಭೆಯಲ್ಲಿದ್ದ ಆಭರಣಗಳು ಶೋಭೆ ಕಳೆದುಕೊಂಡವು. ಗುರುಗಳು ನೆಲದಲ್ಲಿ ನಿಂತು ಕೊಂಡಿದ್ದರೂ ಕೂಡ ಸಿಂಹಾಸನದಲ್ಲಿ  ಕೂರಿದ್ದ ರಾಜನಿಗಿಂತ ಮೇಲೆ ಇರುವಂತೆ ಕಂಡು ಬಂದರು. ಗುರುಗಳು ತನ್ನ ನೀಳವಾದ ಗಡ್ದದೊಂದಿಗೆ ಶೋಭಿಸಿತಿದ್ದರು, ಅವರ ಕಣ್ಣುಗಳು ಅಂತರಾತ್ಮವನ್ನು ಕುಲುಕುವಷ್ಟು ಶಕ್ತಿಶಾಲಿಯಾಗಿತ್ತು. ಔರಂಗಜೇಬನಿಗೆ ಗುರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ. ರಾಜನ ಮಂತ್ರಿಗಳಲ್ಲಿ ಒಬ್ಬನು ಗುರುಗಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಂದಿರುವೆಯಾ ಎಂದು ಕೇಳಿದನು. ಉತ್ತರವಾಗಿ ಗುರುಗಳು ಹೀಗೆ ಗುಡುಗಿದರು “ನಾನು ಹೇಳಿದ್ದೆ, ನೀನು ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತಿರಿಸಿದರೆ ಪೂರ್ಣ ಭಾರತವು ಮತಾಂತರಗೊಳ್ಳುವುದು ಇಲ್ಲದೆ ಹೋದರೆ ನಿನ್ನ ಪ್ರಯತ್ನವನ್ನು ತಕ್ಷಣ ಕೈಬಿಡಬೇಕು. ನಿನಗೆ ತಾಕತ್ತಿದ್ದರೆ ಮೊದಲು ನನ್ನನ್ನು ಮತಾಂತರಗೊಳಿಸು. ನೀನು ಇದರಲ್ಲಿ ಸೋತರೆ ಕೂಡಲೇ ಹಿಂದೂಗಳನ್ನು ಮತಾಂತರಗೊಳಿಸುವ ಮತ್ತು ಮಂದಿರಗಳನ್ನು ಧ್ವಂಸ ಮಾಡುವುದನ್ನು ನಿಲ್ಲಿಸಬೇಕು”. ಇದನ್ನು ಕೇಳಿದ ಸಭಿಕರು ಸಂಪೂರ್ಣ ಆಶ್ಚರ್ಯಚಕಿತರಾದರು ಹಾಗೂ ಸಭೆಯಲ್ಲಿ ಸ್ಮಶಾನ ಮೌನ ಆವರಿಸಿತು. ಸ್ವಲ್ಪ ಸಮಯದ ಬಳಿಕ ಒಬ್ಬ ಮಂತ್ರಿಯು ಈ  ಪ್ರಸ್ತಾವನೆಯನಿಟ್ತನು “ನೀನು ಯಾರ ಬಳಿ ಮಾತನಾಡುತ್ತಿದ್ದೀಯಾ ಎಂದು ನಿನಗೆ ತಿಳಿದಿದೆಯೇ?  ನೀನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ ನಿನಗೆ ರಾಜನ ಆಸ್ಥಾನದಲ್ಲಿ ಒಂದು ಉತ್ತಮ ಪದವಿ ದೊರೆಯುವುದು. ರಾಜನು ನಿನಗೆ ಬೇಕಾದಸ್ಟು ಸಂಪತ್ತನ್ನು ಮತ್ತು ದಾಸಿಯರನ್ನು ಕೊಡುವನು”. ಇದನ್ನು ಕೇಳಿದ ಗುರುಗಳು ನಗಲು ಶುರು ಮಾಡಿದರು. ಅವರ ನಗು ಸಿಂಹದ ಘರ್ಜನೆಯಂತೆ ಕೇಳಿಸಿತು ಮತ್ತು ಸಭೆಯಲ್ಲಿದ ಕಂಭಗಳೆಲ್ಲ ಕಂಪಿಸಿದವು.”

ಔರಂಗಜೇಬನು ತನ್ನ ಸಭೆಯಲ್ಲಿ ಕುಳಿತಿರುವ ಮಂತ್ರಿಗಳನ್ನು ನೋಡಿದ, ಅವರೆಲ್ಲ ಗುರುಗಳ ಮಾತನ್ನು ಕೇಳಿ ಸ್ಟಂಭೀಭೂತರಾಗಿದ್ದರು. ಗುರುಗಳು ತಮ್ಮ ಘರ್ಜನೆಯನ್ನು ಮುಂದುವರಿಸಿದರು “ಮೂರ್ಖ, ನೀನೆಂದುಕೊಂಡಿದ್ದೀಯ?,  ದೇವರ ಹೆಸರಲ್ಲಿ ನನ್ನನ್ನು ಮೂರ್ಖನಗಿಸುವೆ ಎಂದುಕೊಂಡಿಯಾ? ನೀನು ಪಾಲಿಸುವ ದೇವರು ಮತ್ತು ಧರ್ಮ ಮಾತ್ರ ಸರಿ ಎಂದು ಹೇಳಿದರೆ ನಾನು ಅದನ್ನು ಪಾಲಿಸುವೆ ಎಂದುಕೊಂಡಿಯಾ? ಈ ನಿನ್ನ ತಪ್ಪು ಕಲ್ಪನೆಗೆ ಕಾರಣವೇನು? ”

ಆದಿತ್ಯ : ರಾಜನ ಮುಂದೆ ಈ ರೀತಿ ಮಾತನಾಡಲು ಗುರುಗಳಿಗೆ ಅದು ಹೇಗೆ ಸಾಧ್ಯವಾಯಿತು?

ಗುರುದೇವ : ಯಾರು ಇತರರನ್ನು ರಕ್ಷಣೆ ಮಾಡುತ್ತಾರೋ ಮತ್ತು ಧರ್ಮದ ಸಾಕ್ಷಾತ್ ರೂಪವಾಗಿರತ್ತಾರೋ  ಅಂತವರಿಂದ ಇದು ಸಾಧ್ಯ.

ಆದಿತ್ಯ : ಗುರುಗಳು ರಾಜನನ್ನು ಎಲ್ಲರ ಮುಂದೆ ಮೂರ್ಖ ಎಂದು ಕರೆದರೇ? (ಆದಿತ್ಯನ ನಗು)

ಗುರುದೇವ : ಔರಂಗಜೇಬನಿಗೆ ಮಾತುಗಳೇ ಬರದಂತಾಯಿತು. ಅವನ ಮಂತ್ರಿಗಳು ತಮ್ಮ ರಾಜನ ಶೋಚನೀಯ ಪರಿಸ್ತಿತಿಯನ್ನು ಕಂಡು ಇದು ಚರಿತ್ರೆಯಲ್ಲಿ ಮರೆಯಲಾರದ ಘಟನೆಯೆಂದುಕೊಂಡರು. ಗುರುಗಳು ತಮ್ಮ ಘರ್ಜನೆಯನ್ನು ಮುಂದುವರಿಸುತ್ತಾ ಹೀಗೆ ಹೇಳಿದರು “ದೇವರೊಬ್ಬನೇ, ನಾಮ ಹಲವು. ದೇವರ ಕಡೆ ಹೋಗುವ ಎಲ್ಲ ದಾರಿಗಳ ಗುರಿ ಒಂದೆ. ನಾವು ಯಾವ ನಾಮದಿಂದರು ದೇವರನ್ನು ಕರೆಯಬಹುದು ಮತ್ತು ನಮ್ಮಲ್ಲಿ ಯಾವುದೇ ರೀತಿಯ ಅಹಂಕಾರ, ವಂಚನೆ ಅಥವಾ ದರ್ಪ ಇರಬಾರದು. ಆದರೆ ಔರಂಗಜೇಬ ನಿನ್ನಲ್ಲಿ ಅದೆಲ್ಲವನು ನಾನು ಕಾಣುತ್ತಿದ್ದೇನೆ.”

ಆದಿತ್ಯ : ರಾಜನಿಗೆ ಯಾಕೆ ಮಾತುಗಳು ಬರಲಿಲ್ಲ?

ಗುರುದೇವ : ಅಹಂಕಾರದ ಮದದಲ್ಲಿರುವ ಮನುಷ್ಯನಿಗೆ ಸತ್ಯ ಕಾಣುವುದಿಲ್ಲ . ಸತ್ಯ ಎದುರಾದಾಗ ಅವನು ಮಾತು ಕಳೆದುಕೊಳ್ಳುತ್ತಾನೆ. ರಾಜನು ಗುರುಗಳಿಗೆ ಯಾವುದಾದರು ಪವಾಡ ಮಾಡಿ ತೋರಿಸಲು ಹೇಳಿದನು. ಗುರುಗಳು ಅದನ್ನು ನಿರಾಕರಿಸಿದರು. ಔರಂಗಜೇಬನು ಕೊನೆಯದಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಆದೇಶಿಸಿದನು. ಉತ್ತರವಾಗಿ ಗುರುಗಳು ತಾನು ಯಾವತ್ತೂ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಿಲ್ಲವೆಂದು ಹೇಳಿದರು. ತನ್ನ ದೇಹವನ್ನು ಕತ್ತರಿಸಿ ತುಂಡು ಮಾಡಿದರೂ ತಾವು ಮಾತಾಂತರಗೊಳ್ಳುವುದಿಲ್ಲವೆಂದು ಹೇಳಿದರು.

ರಾಜನಿಗೆ ಯಾರು ಈ ರೀತಿ ಹೀನಾಯಾವಗಿ ಅವಮಾನ ಮಾಡಿರಲಿಲ್ಲ. ಗುರುಗಳು ಔರಂಗಜೇಬನ ಪ್ರಸ್ತಾವನೆಯನ್ನು ನಿರಾಕರಿಸಿದ ವಿಷಯ ಎಲ್ಲಾ ಭಾರತೀಯರಿಗೆ ತಿಳಿದ ಮೇಲೆ ಅವನ ಪ್ರಜೆಗಳು ಮತ್ತು ಮುಂಬರುವ ಪೀಳಿಗೆಗಳು ಅವನನ್ನು ಹಂಗಿಸದೆ ಇರುವರೇ?. ರಾಜನು ಗುರುಗಳಿಗೆ ಹೀಗೆ ಹೇಳಿದನು “ಹೇ ಮೂರ್ಖ ! ನೀನು ಸರಪಳಿಯಲ್ಲಿ ಬಂಧಿಯಾಗಿರುವೆ, ನಿನ್ನನ್ನು ಒಂದು ಕ್ಷಣದಲ್ಲಿ ನಾನು ಕೊಲ್ಲಿಸಬಲ್ಲೆ”.  ಗುರುಗಳು ಹೀಗೆ ಪ್ರತಿಕ್ರಿಯಿಸಿದರು “ಹೌದು ಔರಂಗಜೇಬ ನೀನು ನನ್ನನ್ನು ಕೊಲ್ಲಿಸಬಲ್ಲೆ, ಆದರೆ ನನ್ನ ಜನರ ಚೇತನವನ್ನಲ್ಲ. ನಾನು ನಿನ್ನಸ್ಟು ಅಸಹಾಯಕ ರಾಜನನ್ನು ಎಂದೂ ನೋಡಿಲ್ಲ. ನೀನು ಭರತವರ್ಷದ ಚಕ್ರವರ್ತಿಯಾಗಿ  ನಿನ್ನ ಇಡೀ ಸಭೆಯ ಮುಂದೆ ಒಬ್ಬ ಭಿಕ್ಷುಕನಂತೆ ನನ್ನ ಬಳಿ ಭಿಕ್ಷೆ ಬೇಡುತ್ತಾ ಇದ್ದೀಯಾ”. ಇದನ್ನು ಕೇಳಿದ ಔರಂಗಜೇಬನು ಗುರುಗಳನ್ನು ಸಭೆಯಿಂದ ಕೆರೆದುಕೊಂಡು ಹೋಗಿ   ನಲವತ್ತು ದಿನದ ಚಿತ್ರಹಿಂಸೆ ಕೊಡಲು ಆದೇಶ ನೀಡಿದನು. ನಲವತ್ತು ದಿನಗಳ ಬಳಿಕವೂ ಗುರುಗಳು ಮತಾಂತರಗೊಳ್ಳಲು ನಿರಾಕರಿಸಿದರೆಒಂದೊಂದೇ ಹನಿ ರಕ್ತ ಹರಿಯುವಂತೆ ತಲೆಯನ್ನು ಕಡಿಯಲು ಆದೇಶ ಹೊರಡಿಸಿದನು. ತಲೆಯನ್ನು ಕಡಿದ ಮೇಲೆ, ಎಲ್ಲರಿಗೂ ಕಾಣುವಂತೆ ನಗರದಲ್ಲೆಲ್ಲ ಅದನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದನು. ಇದನ್ನು ಕೇಳಿದ ಗುರುಗಳು ಔರಂಗಜೇಬನಿಗೆ ಹೀಗೆ ಹೇಳಿದರು “ಇದು ಯಾರ ಸೋಲು ಔರಂಗಜೇಬ್? ನಿನ್ನ ಅಗಾಧವಾದ ಸಾಮರ್ಥ್ಯವು ಕೂಡ ಒಬ್ಬ ನಿರಸ್ತ್ರ ಮನುಷ್ಯನನ್ನು ಮತಾಂತರಗೊಳಿಸಲು ಶಕ್ತವಾಗಲಿಲ್ಲ”

ಕೆಲವು ದಿನಗಳು ಕಳೆದ ಬಳಿಕ ಗುರುಗಳ ತಲೆ ಕಡಿಯಲಾಯಿತು. ಅವರ ತಲೆಯನ್ನುನಗರದಲ್ಲೆಲ್ಲ ಮೆರವಣಿಗೆ ಮಾಡಿಸಲಾಯಿತು. ಗುರುಗಳ ಕೆಲವು ಅನುಯಾಯಿಗಳು ಅವರ ದೇಹವನ್ನು ನಗರದಿಂದ ದೂರ ಸಾಗಿಸುವಲ್ಲಿ ಯಶಸ್ವಿಯಾದರು. ಗುರುಗಳ ದೇಹದ ಅಂತ್ಯ ಸಂಸ್ಕಾರ  ನಡೆಸಲಾಯಿತು.  ಗುರುಗಳ ತಲೆಯನ್ನು ಕಡಿದ ಸ್ಥಳವನ್ನು ಗುರುದ್ವಾರ ಶೀಶ್  ಗಂಜ್ ಎಂದು ಕರೆಯಲಾಗುತ್ತದೆ.

Leave a Reply

Sarayu trust is now on Telegram.
#SangamTalks Updates, Videos and more.

Powered by
%d bloggers like this: