ಮುಸ್ಲಿಮರ ಮಾತೃಭೂಮಿಯ(ಭಾರತ), ದೇಶನಿಷ್ಠೆ ಬಗ್ಗೆ ಅಂಬೇಡ್ಕರ್ ಬರೆಯುತ್ತಾರೆ: “ಇಸ್ಲಾಂನ ಸಿದ್ದಾಂತಗಳಲ್ಲಿ ವಿಶೇಷ ಗಮನಕೊಡ ಬೇಕಾದ ಒಂದು ಸಿದ್ದಾಂತ ಹೇಳುತ್ತದೆ; ಯಾವ ದೇಶದಲ್ಲಿ ಮುಸ್ಲಿಂನ ಶಾಸನ ಇರುವುದಿಲ್ಲವೋ. ಅಲ್ಲಿ ಮುಸ್ಲಿಂ ಕಾನೂನು ಮತ್ತು ಸ್ಥಳೀಯ ಕಾನೂನಿನ ಮದ್ಯೆ ಯಾವಾಗಲಾದರೂ ತಿಕ್ಕಾಟ ಉಂಟಾದಲ್ಲಿ ಇಸ್ಲಾಮಿಕ್ ಕಾನೂನೇ ಮೇಲುಗೈ ಸಾಧಿಸಬೇಕು, ಮತ್ತು ಪ್ರತಿ ಮುಸಲ್ಮಾನನೂ ಮುಸ್ಲಿಂ ಕಾನೂನನ್ನು ಪಾಲಿಸುವುದು ಹಾಗು ಸ್ಥಳದ ಕಾನೂನನ್ನು ನಿರಾಕರಿಸುವುದು ಸರಿಯೆಂದು ಸಾಧಿಸಬೇಕು.” ಮುಂದಿನ ಹೇಳಿಕೆ ಎತ್ತಿ ತೋರಿಸುತ್ತ: “ಒಬ್ಬ ಮುಸಲ್ಮಾನನ ಏಕಮಾತ್ರ ನಿಷ್ಠೆ, ನಾಗರಿಕನಾಗಿರಲಿ ಅಥವಾ ಸೈನಿಕನಾಗಿರಲಿ, ಮುಸ್ಲಿಂ ಆಡಳಿತದ ಕೆಳಗಿರಲಿ ಅಥವಾ ಮುಸ್ಲಿಮೇತರ ಆಡಳಿತದ ಇರಲಿ, ಕುರಾನಿನ ಆದೇಶದಂತೆ ಆತನ ನಿಷ್ಠೆಯನ್ನು ದೇವರಿಗೆ, ಪ್ರವಾದಿಗೆ ಮತ್ತು ಯಾರು ಮುಸಲ್ಮಾನರ ನಡುವಿನಿಂದಲೇ ಅಧಿಕಾರಿಯಾಗಿರುವರೋ ಅವರಿಗೆ ಅವನು ಒಪ್ಪಿಸಬೇಕು…
ಅಂಬೇಡ್ಕರ್ ಮುಂದೆ ಸೇರಿಸುತ್ತ :”ಇದು ಸದೃಢ ಸರ್ಕಾರ ಬಯಸುವವನಿಗೆ ಬಹಳ ಆತಂಕ ಮಾಡಬಹುದು. ಆದರೆ ಇದಾವುದೂ ಮುಸ್ಲಿಂ ಸಿದ್ದಾಂತಕ್ಕೆ ಏನೇನೂ ಅಲ್ಲ, ಒಂದು ದೇಶ ಮುಸ್ಲಮಾನರಿಗೆ ಎಂದು ಮಾತ್ರುಭೂಮಿ ಆಗುತ್ತದೆ ಅಥವಾ ಎಂದಾಗದು ಅಂತ ಅದು ನಿರ್ದೇಸುತ್ತದೆ…ಮುಸ್ಲಿಂ ಧರ್ಮವಿಧಿ ಅನುಸಾರವಾಗಿ ಜಗತ್ತು ಎರಡು ಪಂಗಡಗಳಾಗಿ ವಿಭಾಗಿಸಲಾಗಿದೆ, ದಾರ್-ಉಲ್-ಇಸ್ಲಾಂ(ಇಸ್ಲಾಮ್ ನಿವಾಸ) ಮತ್ತು ದಾರ್-ಉಲ್-ಹರ್ಬ್(ಯುದ್ಧ ನಿವಾಸ). ಒಂದು ದೇಶ ಮುಸಲ್ಮಾನರ ಪ್ರಬುತ್ವದಲ್ಲಿ ಇದ್ದಾಗ ಅದು ದಾರ್-ಉಲ್-ಇಸ್ಲಾಂ ಆಗುತ್ತದೆ. ಒಂದು ದೇಶ ದಾರ್-ಉಲ್-ಹರ್ಬ್ ಎಲ್ಲಿ ಮುಸಲ್ಮಾನರು ಕೇವಲ ದೇಶವಾಸಿಗಳಾಗಿರುತ್ತಾರೆ ಆದರೆ ಆ ದೇಶದ ಪ್ರಭುತ್ವಧಾರಿಗಳಾಗಿರುವುದಿಲ್ಲಾ. ಮುಸಲ್ಮಾನರ ಈ ರೀತಿಯ ಧರ್ಮವಿಧಿಯನ್ನು ಇಟ್ಟುಕೊಂಡು, ಭಾರತವು ಮುಸಲ್ಮಾನರಿಗೂ ಹಾಗು ಹಿಂದೂಗಳಿಗೂ ಸಮಾನ ಮಾತೃಭೂಮಿಯಾಗಿ ಇರಲು ಅಸಾಧ್ಯ. ಈ ದೇಶ ಮುಸಲ್ಮಾನರ ಭೂಮಿ ಆಗಬಹುದು-ಆದರೆ ‘ಮುಸಲ್ಮಾನರು ಹಾಗೂ ಹಿಂದೂಗಳು ಸರಿಸಮಾನರಾಗಿ ವಾಸಿಸುವ’ ಭೂಮಿಯಾಗಲಾರದು. ಇದಲ್ಲದೆ, ಇದು ಮುಸ್ಲಿಮರಿಂದ ಆಡಳಿತ ನಡೆಸಲ್ಪಟ್ಟಾಗ ಮಾತ್ರ ಮುಸಲ್ಮಾನರ ಭೂಮಿಯಾಗಬಹುದು. ಮುಸ್ಲಿಮೇತರ ಶಕ್ತಿಯ ಅಧಿಕಾರಕ್ಕೆ ಒಳಪಟ್ಟ ತತ್ಕ್ಷಣದಲ್ಲಿ, ಅದು ಮುಸ್ಲಿಮರ ಭೂಮಿಯಾಗಿ ನಿಲ್ಲದು. ದಾರ್-ಉಲ್-ಇಸ್ಲಾಂ ಆಗಿರುವ ಬದಲು ಅದು ದಾರ್-ಉಲ್-ಹರ್ಬ್ ಆಗುತ್ತದೆ. “ಈ ದೃಷ್ಟಿಕೋನವು ಕೇವಲ ಶೈಕ್ಷಣಿಕ ಅಧ್ಯಯನ ಆಸಕ್ತಿಯನ್ನು ಹೊಂದಿದೆ ಎಂದು ಭಾವಿಸಬಾರದು. ಅಂಬೇಡ್ಕರ್ ಮುಂಸೇರಿಸುತ್ತ ಏಕೆಂದರೆ ಇದು ಮುಸ್ಲಿಮರ ನಡವಳಿಕೆಯನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿರುವ ಸಕ್ರಿಯ ಶಕ್ತಿಯಾಗಲು ಸಮರ್ಥವಾಗಿದೆ…ದಾರ್-ಉಲ್-ಹರ್ಬ್ನಲ್ಲಿ ತಮನ್ನು ವಾಸಿಸುತ್ತ ಕಂಡುಕೊಳ್ಳುವ ಮುಸ್ಲಿಮರಿಗೆ, ಹಿಜರತ್ [ವಲಸೆ ಹೋಗುವ] ತಪ್ಪಿಸಿಕೊಳ್ಳುವ ಏಕೈಕ ಮಾರ್ಗವಲ್ಲ ಎಂದು ಸಹ ಅದು ಉಲ್ಲೇಖಿಸಿದೆ. ಮುಸ್ಲಿಂ ಧರ್ಮವಿಧಿಯಲ್ಲಿ ಇನ್ನ್ನೊಂದು ಮಾಹಾಜ್ಞೆ ಇದೆ ಅದನ್ನು ಜಿಹಾದ್(ಕ್ರುಸೇಡ್) ಎನ್ನುವರು ಅದರ ಮೂಲಕ “ಇಡೀ ಜಗತ್ತನ್ನು ತನ್ನ ಅಧೀನಕ್ಕೆ ತರಲು ಇಸ್ಲಾಂ ಧರ್ಮವನ್ನು ವಿಸ್ತರಿಸಲು ಮುಸ್ಲಿಂ ರಾಜ್ಯಭಾರಕ್ಕೆ ಅಧಿಕಾರ ಕೊಡುತ್ತದೆ. ಜಗತ್ತನ್ನು ಎರಡು ಶಿಬಿರಗಳಾಗಿ ವಿಂಗಡಿಸಲಾಗಿದೆ, ದಾರ್-ಉಲ್-ಇಸ್ಲಾಮ್ (ಇಸ್ಲಾಂನ ವಾಸಸ್ಥಾನ), ದಾರ್-ಉಲ್-ಹರ್ಬ್ (ಯುದ್ಧದ ವಾಸಸ್ಥಾನ), ಎಲ್ಲಾ ದೇಶಗಳು ಒಂದು ವರ್ಗ ಅಥವಾ ಇನ್ನೊಂದು ವರ್ಗಕ್ಕೆ ಬಂದೇ ಬರುತ್ತವೆ. ತಾಂತ್ರಿಕವಾಗಿ, ಇದು ಮುಸ್ಲಿಂ ಆಡಳಿತಗಾರನ ಕರ್ತವ್ಯವಾಗಿದೆ, ಆತನು ಸಮರ್ಥನಾಗಿರುತ್ತಾನೆ; ದಾರ್-ಉಲ್-ಹರ್ಬ್ ಅನ್ನು ದಾರ್-ಉಲ್-ಲಸ್ಲಾಮ್ ಆಗಿ ಪರಿವರ್ತಿಸಲು. ” ಭಾರತದಲ್ಲಿ ಮುಸ್ಲಿಮರು ಹಿಜರತ್ ಅನ್ನು ಆಶ್ರಯಿಸಿದ ಘಟನೆಗಳು ಇರುವಂತೆಯೇ, ಅವರು ಜಿಹಾದ್ ಘೋಷಿಸಲು ಹಿಂಜರಿಯಲಿಲ್ಲ ಎಂದು ತೋರಿಸುವ ಘಟನೆಗಳೂ ಇವೆ.