ಹೀಗೆ ಈ ಎಲ್ಲಾ ದಾಖಲೆಗಳ ಪರಿಣಾಮವಾಗಿ ನಾವು ಕೇಳುತ್ತಿರುವುದು ಅಥವಾ ಸನ್ನದುವಿನ ಮೊದಲನೇ ಅಂಶದ ಆರಂಭಿಕ ಉಪ ಬೇಡಿಕೆಗಳ ಭಾಗವಾಗಿ ಕೋರಿಕೊಳ್ಳುವುದೇನೆಂದರೆ, ಅನುಚ್ಚೇದ 26ನ್ನು ತಿದ್ದುಪಡಿಸಿ, ಹಿಂದೂ ಮಂದಿರಗಳನ್ನು ಹಿಂದೂಗಳ ಸ್ವಾಧೀನಕ್ಕೆ ಒಪ್ಪಿಸುವುದು. ಸದ್ಯದ ಅನುಚ್ಚೇದದಲ್ಲಿನ ಒಂದು ವಾಕ್ಯಾಂಶವನ್ನು ನೀವು ನೆನಪಿಸಿಕೊಳ್ಳಬಹುದಾದರೆ, ಅದರಲ್ಲಿ, ಸರ್ಕಾರವು ಯಾವುದೇ ಧಾರ್ಮಿಕೇತರ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಹದು ಎಂದು ಹೇಳಲಾಗಿದೆ. ನಾವು ಕೇಳುತ್ತಿರುವುದೇನೆಂದರೆ, ಈ ಅನುಚ್ಛೇದ ಒಳಗೊಂಡಿರುವ ಯಾವುದೇ ಅಂಶವನ್ನು ಪರಿಗಣಿಸದೇ, ಸರ್ಕಾರವು ಧಾರ್ಮಿಕ ಉದ್ದೇಶಗಳಿಗೆ ಸ್ಥಾಪಿತವಾಗಿರುವ ಯಾವುದೇ ಸಂಸ್ಥೆಗಳ ನಿಯಂತ್ರಣ, ನಿರ್ವಹಣೆ ಮಾಡಬಾರದು.
ಸರ್ಕಾರವು ಸ್ಪಷ್ಟವಾಗಿ ಈ ಅಧಿಕಾರವನ್ನು ಹಿಂಪಡೆಯಬೇಕು. ಹೇಗಿದ್ದರೂ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆಯ ತೊಂದರೆಗಳನ್ನು ನಿವಾರಿಸಲು ತೆರಿಗೆ ಕಾನೂನು, ಅಪರಾಧ ಕಾನೂನು ಹೀಗೆ ಹಲವಾರು ಕಾಯ್ದೆ ಕಾನೂನುಗಳು ಸಾಕಷ್ಟಿವೆ. ಆದರೆ ಈ ವಿಧದ ಕಾನೂನು ವಾಣಿಜ್ಯ ಘಟಕ ಅಥವಾ ಸಂಘಟನೆಗಳಿಗಾಗಲಿ ಇಲ್ಲ. ಹಾಗಾಗಿ ಈ ಮೇಲಿನ ಅಂಶದ ಜೊತೆಗೆ ಇನ್ನೊಂದೆರಡು ಉಪ ಅಂಶಗಳನ್ನು ಅನ್ವಯಿಸಿ, ಸರ್ಕಾರದ ಅಧಿಕಾರ ಸಂಪೂರ್ಣವಾಗಿ ಹಿಂಪಡೆದಿರುವುದನ್ನು ಖಚಿತಪಡಿಸಬೇಕು. ಅಂದರೆ ಈ ನಿಟ್ಟಿನಲ್ಲಿ ಜಾರಿಯಲ್ಲಿರುವ ಭಾರತದ ಎಲ್ಲಾ ಕಾಯ್ದೆ-ಕಾನೂನುಗಳು ಅಸಿಂಧುವಾಗುತ್ತದೆ. ಉದಾಹರಣೆಗೆ, ನಮ್ಮಲ್ಲಿ ಹಲವಾರು ರಾಜ್ಯ ಸರ್ಕಾರಗಳಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮದ ಮುಖಾಂತರ ಮಂದಿರಗಳನ್ನು ವಶಪಡಿಸಿಕೊಳ್ಳಬಹುದು. ಹಾಗಾಗಿ ಈ ರೀತಿಯ ಕೆಲವು ಲೋಪದೋಷಗಳಿಂದ ಉದ್ಭವವಾಗುವ ಪ್ರಶ್ನೆಗಳು, ಸದ್ಯ ಅಸ್ತಿತ್ವದಲ್ಲಿರುವ ಕಾನೂನು ಕಾರ್ಯ ನಿರ್ವಹಿಸುತ್ತದೆಯೇ?, ಇತ್ಯಾದಿ. ಆದ್ದರಿಂದ ನಾವು ಸ್ಪಷ್ಟವಾಗಿ ತಿಳಿಸುವುದೇನೆಂದರೆ, ಈ ರೀತಿಯ ಯಾವುದೇ ನಿಯಮ-ಕಾನೂನುಗಳು ಮಾನ್ಯವಾಗದು ಹಾಗೂ ಮುಂಬರುವ ಕಾಲದಲ್ಲಿ ಸರ್ಕಾರವು ಅಧಿಕಾರ ಪಡೆಯಲು ಯಾವುದೇ ವಿಧವಾದ ಕಾನೂನು ರಚಿಸಬಾರದು. ಇವೆಲ್ಲಾ ಅಂಶಗಳು ಈ ಬೇಡಿಕೆಯ ಸಾರಾಂಶ. ಅಧಿಕಾರ ಹಿಂಪಡೆಯುವುದು, ಸದ್ಯ ಅಸ್ತಿತ್ವದಲ್ಲಿರುವ ಎಲ್ಲಾ ಕಾನೂನುಗಳನ್ನು ಅಮಾನ್ಯಗೊಳಿಸುವುದು ಮತ್ತು ಮುಂದೆ ಯಾವುದೇ ಕಾನೂನು ಮಾಡದೇ ಇರುವುದು.