Wednesday, October 20, 2021
Home > ಇತರೆ > 10ನೇ ಶತಮಾನದ ಭಾರತೀಯ ಚಿತ್ರಕಲೆಯಲ್ಲಿರುವ ಭಾವಚಿತ್ರಗಳು | ಬಿನೋಯ್ ಬೆಹ್ಲ್

10ನೇ ಶತಮಾನದ ಭಾರತೀಯ ಚಿತ್ರಕಲೆಯಲ್ಲಿರುವ ಭಾವಚಿತ್ರಗಳು | ಬಿನೋಯ್ ಬೆಹ್ಲ್

ಈಗ ದೊರೆ ರಾಜ ರಾಜ ಚೋಳ ತನ್ನ ಗುರು, ಗುರು ಕರುವುರಾರ್ ಇವರ ಜೊತೆಗಿರುವ ಚಿತ್ರವನ್ನು ನೋಡೋಣ. ಇದು ಭಾರತದ ಚಿತ್ರಕಲೆ ಇತಿಹಾಸದಲ್ಲಿ ಉಳಿದುಕೊಂಡಿರುವ ಪೂರ್ವಕಾಲಿಕ ಭಾವಚಿತ್ರ. ಹಾಗೂ ಇದು ಹತ್ತನೆಯ ಶತಮಾನದ ಅಂತ್ಯದ ಕಾಲಮಾನಕ್ಕೆ ಸೇರಿರುತ್ತದೆ. ಭಾರತದ ಕಲೆಯ ಬಗ್ಗೆ ಒಂದು ಅದ್ಭುತವಾದ ವಿಚಾರವೆಂದರೆ, ಸುಮಾರು ಒಂದು ಸಾವಿರದ ಐನೂರು ವರ್ಷಗಳಲ್ಲಿ, ಸಾವಿರಾರು ಆಕೃತಿಗಳು, ಮೂರ್ತಿಗಳು, ಪ್ರಾಣಿಗಳು, ಸುಂದರವಾದ ಹೂವುಗಳು, ಹಣ್ಣುಗಳು ಮತ್ತು ಸಾಮಾನ್ಯ ಮಾನವನನ್ನು ಸೃಷ್ಟಿಸಿ ತೋರಿಸಲಾಗಿದೆ. ಆದರೆ ಭಾವಚಿತ್ರಗಳನ್ನು ಎಂದೂ ಚಿತ್ರಿಸಿರಲಿಲ್ಲ. ಯಾರ ಆಸ್ಥಾನದಲ್ಲಿ ಚಿತ್ರಕಲೆ ರಚನೆಯಾಗುತ್ತಿತ್ತೋ, ಆ ರಾಜನ ಭಾವಚಿತ್ರವೂ ಸಹ ಚಿತ್ರಿಸುತ್ತಿರಲಿಲ್ಲ. ಕಲೆಯ ಮುಖ್ಯ ಉದ್ದೇಶ ನಮ್ಮಲ್ಲಿ ಬದಲಾವಣೆ ತರುವುದು, ನಮ್ಮನ್ನು ಅಹಂಕಾರ, ಮನುಷ್ಯ ಸಹಜ ತೊಂದರೆಗಳು, ಸ್ವಪ್ರತಿಷ್ಠೆಯಿಂದ ದೂರ ಮಾಡುವುದು. ಹಾಗಾಗಿ ಭಾವಚಿತ್ರವು ಅನವಶ್ಯಕ ಮತ್ತು ಕಲೆಯ ಉದ್ದೇಶಕ್ಕೆ ವಿರೋಧ ಎಂಬ ಭಾವನೆ ಇತ್ತು.

ಚಿತ್ರ ಸೂತ್ರದ ಪ್ರಕಾರ ಕಲೆಯು ಯಾವುದೇ ವ್ಯಕ್ತಿಗಿಂತ ಮಹತ್ವಪೂರ್ಣವಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಕಲೆಯು ಕೇವಲ ಶಾಶ್ವತ ಮೌಲ್ಯಗಳು ಮತ್ತು ಶಾಶ್ವತ ವಿಷಯಗಳನ್ನು ತಿಳಿಸಬೇಕು. ಆದರೆ ಇದರಲ್ಲಿ ವಿನಾಯಿತಿಯುಂಟು ಎಂಬುದನ್ನು ಗಮನಿಸಬೇಕು.

ಕುಷಾಣರ ಕಾಲದಲ್ಲಿ, ಅಂದರೆ ಮೊದಲನೇ ಶತಮಾನದಲ್ಲಿ ಮಧ್ಯ ಏಷ್ಯಾದಿಂದ ಬಂದ ಕುಷಾಣ ಆಡಳಿತಗಾರರು, ತಮ್ಮ ಭಾವಚಿತ್ರಗಳನ್ನು ರಚಿಸಿ ಮಂದಿರಗಳಲ್ಲಿಡುತ್ತಿದ್ದರು. ಆದರೆ ಅವರ ಆಡಳಿತ ಕಾಲದ ನಂತರ ಭಾರತದ ಪರಂಪರೆ ತನ್ನ ವಾಸ್ತವಕ್ಕೆ ಮರಳಿತು ಮತ್ತು ಮೊಟ್ಟಮೊದಲ ಭಾವಚಿತ್ರಗಳನ್ನು ಮಾಮಲ್ಲಾಪುರಂನಲ್ಲಿ, 7 – 8ನೇ ಶತಮಾನದಲ್ಲಿ, ಶಿಲ್ಪದ ರೂಪದಲ್ಲಿ ಕಾಣಬಹುದು.

ನಾನು ಮೊದಲೇ ಹೇಳಿದಂತೆ, ಈ ಚಿತ್ರವು 10ನೇ ಶತಮಾನದ ಅಂತ್ಯದ ಸಮಯದ್ದಾಗಿದ್ದು ಇಂದಿಗೂ ಉಳಿದುಕೊಂಡಿರುವ ಪೂರ್ವಕಾಲಿಕ ಭಾವಚಿತ್ರವಾಗಿದೆ. ಇದರಲ್ಲಿ ದೊರೆ ರಾಜ ರಾಜ ಚೋಳ ಹಾಗೂ ಅವರ ಗುರು, ಗುರು ಕರುವುರಾರ್ ಇವರನ್ನು ಕಾಣಬಹುದು. ಒಂದು ಕುತೂಹಲಕಾರಿ ವಿಷಯವೇನೆಂದರೆ, ರಾಜನು ಸಂಪ್ರದಾಯ ತೊರೆದು, ತನ್ನನ್ನು ತಾನು ಕಲೆಯಲ್ಲಿ ಪ್ರಸ್ತುತಪಡಿಸಿದರೂ, ಬಹಳ ಸಂಕೋಚದಿಂದ, ಗುರುವಿನ ಹಿಂದೆ, ಅವರ ಆಶ್ರಯದಲ್ಲಿ ನಿಂತಿರುವುದು ವಿಶೇಷ.

ಈ ಪರಂಪರೆಯು 13ನೆೇ ಶತಮಾನದವರೆಗೂ ದೇಶದ ಹಲವಾರು ಜಾಗಗಳಲ್ಲಿ ಮತ್ತು ಮಂದಿರಗಳಲ್ಲಿ ಜಾರಿಯಲ್ಲಿರುತ್ತದೆ. ಕೆಲವು ರಾಜರುಗಳ ಭಾವಚಿತ್ರಗಳು ಕಾಣಲು ಶುರುವಾದರೂ, ಅವು ಸಾಮಾನ್ಯವಾಗಿ ಅತಿ ಸಣ್ಣದಾಗಿಯೂ, ಅಥವಾ ರಾಜನು ಶಿವಲಿಂಗದ ಮುಂದೆ ಪ್ರಾರ್ಥಿಸುವಂತೆಯೂ, ಅಥವಾ ರಾಜನು ತನ್ನ ಗುರುವಿನ ಎದುರಿಗೆ ಮೊಣಕಾಲೂರಿರುವಂತೆಯೂ ಚಿತ್ರಿಸಲ್ಪಡುತ್ತಿತ್ತು. ಹೀಗೆ ರಾಜನು ತನ್ನನ್ನು ಚಿತ್ರಕಲೆಯಲ್ಲಿ ಪ್ರಸ್ತುತ ಪಡಿಸಲು ಪ್ರಾರಂಭ ಮಾಡಿದನಾದರೂ, ಅದು ಬಹಳ ವಿನಮ್ರ ಭಾವನೆಯಿಂದ ಕೂಡಿದ್ದುದಾಗಿತ್ತು. ಹಲವು ವರ್ಷಗಳ ನಂತರ ಇದು ಬದಲಾಗಿ, ರಾಜರು ಅತಿ ಭವ್ಯವಾಗಿ ಹಾಗೂ ಸ್ವಪ್ರಾಮುಖ್ಯತೆಯಿಂದ ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ. ಈ ಅಂಶವು ಭಾರತದ ಕಲೆಯ ಪರಂಪರೆಯಲ್ಲಿ ಬಹಳ ಅದ್ಭುತವಾದ ವಿಷಯವಾಗಿದೆ.

Leave a Reply

Sarayu trust is now on Telegram.
#SangamTalks Updates, Videos and more.

Powered by
%d bloggers like this: